ಸಿನಿಮಾಗಳು ಬಿಡುಗಡೆ ಆಗುತ್ತಿದೆ ಅಂದರೆ ಸಾಕು ಚಿತ್ರವನ್ನ ಯಾವ ರೀತಿಯಲ್ಲಿ ಪ್ರಚಾರ ಮಾಡಬೇಕು ಅನ್ನುವುದರ ಬಗ್ಗೆ ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರುಗಳು ತಲೆ ಕೆಡಿಸಿಕೊಂಡಿರುತ್ತಾರೆ. ಸಿನಿಮಾದ ಕಂಟೆಂಟ್ ನಂತೆಯೇ ಪ್ರಚಾರವನ್ನ ವಿಭಿನ್ನವಾಗಿ ಮಾಡಿದರೆ ಮಾತ್ರ ಸಿನಿಮಾ ಅಭಿಮಾನಿಗಳು ನಮ್ಮ ಚಿತ್ರದ ಕಡೆ ತಿರುಗಿ ನೋಡುವುದು ಅನ್ನೋದನ್ನ ಖಚಿತವಾಗಿ ತಿಳಿದುಕೊಂಡಿರುವ ನಿರ್ದೇಶಕ ಆರ್ ಚಂದ್ರು, ತಾವೇ ನಿರ್ದೇಶನ ಮಾಡಿರುವ ಕನಕ ಚಿತ್ರದ ಬಿಡುಗಡೆಗೆ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಥಿಯೇಟರ್ ಮುಂದೆ ಅಭಿಮಾನಿಗಳ ಜೊತೆ ಸೇರಿ ಅಭಿಮಾನಿ ಆಗಿ ಹಾಲು ಹಾಗೂ ಬಿರಿಯಾನಿ ಕಾಂಬಿನೇಶನ್ ನಲ್ಲಿ ಸಿನಿಮಾವನ್ನ ಪ್ರೇಕ್ಷಕರಿಗೆ ತೋರಿಸಲು ನಿರ್ಧಾರ ಮಾಡಿದ್ದಾರೆ.
ಕನಕ ಚಿತ್ರಕ್ಕೆ ಅಣ್ಣಾವ್ರ ಅಭಿಮಾನಿ ಅನ್ನುವ ಟ್ಯಾಗ್ ಲೈನ್ ಇದೆ, ಚಿತ್ರದ ಕಥೆಯಲ್ಲಿ ಡಾ ರಾಜ್ ಕುಮಾರ್ ಅವರ ಆದರ್ಶಗಳನ್ನ ಅಳವಡಿಸಿಕೊಳ್ಳಲಾಗಿದೆ. ಇದೇ ಕಾರಣದಿಂದ ಡಾ ರಾಜ್ ಅವರ ಕಟೌಟ್ ಗೆ ಟ್ಯಾಂಕರ್ ನಲ್ಲಿ ಹಾಲನ್ನು ತಂದು ಅಭಿಷೇಕ ಮಾಡುವ ಪ್ಲಾನ್ ಮಾಡಲಾಗಿದೆ.
There won't be just Duniya Vijay's cutout in front of the theater on the day of Kanaka movie release . Dr . Rajkumar's cutout will also be there during the release